ರೆಸ್ಟೋರೆಂಟ್ ಶೈಲಿಯ ಮಟನ್ ಚಾಪ್ಸ್
ಬೇಕಾಗಿರುವ ಪದಾರ್ಥಗಳು
1. 1ಕೆಜಿ ಮಟನ್ ಚಾಪ್ಸ್
2. 3 ಈರುಳ್ಳಿ ಟೆಮೇಟೋ
3. 2ಚಮಚ ಪೇಪರ್ ಪುಡಿ ಅರಶಿಣ ಪುಡಿ
4. 10 ಅಲ್ಲ ಬೆಳ್ಳುಳ್ಳಿ ಹಸಿ ಮೆಣಸಿನ ಕಾಯಿ
5. 4 ಲವಂಗ ಚೆಕ್ಕೆ
6. 1ಚಮಚ ಕಾಳು ಮೆಣಸು
7. ಕೋತೊಂಬರಿ ಪುದೀನಾ ಸೊಪ್ಪು
8. ಎಣ್ಣೆ ಉಪ್ಪು
ಮಾಡುವ ವಿಧಾನ
ಒಂದು ತವದಲ್ಲಿ ಎಣ್ಣೆ ಹಾಕಿ ಅದಕ್ಕೆ 2 ಈರುಳ್ಳಿ ಲವಂಗ ಚೆಕ್ಕೆ
ಹಸಿ ಮೆಣಸಿನಕಾಯಿ ಅಲ್ಲ ಬೆಳ್ಳುಳ್ಳಿ ಕೋತಿಂಬರಿ ಪುದೀನಾ ಸೊಪ್ಪು ಹಾಕಿ ಚೆನ್ನಾಗಿ ಫ್ರೈ ಮಾಡಿ ನಂತರ ಒಂದು ಮಿಕ್ಸಿ ಜಾರಿನಲ್ಲಿ ಫ್ರೈ ಮಾಡಿದ ಮಸಾಲೆ ಎನ್ನು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.
ಒಂದು ಕುಕ್ಕರಿನಲ್ಲಿ 100ML ಎಣ್ಣೆ ಹಾಕಿ ಅದಕ್ಕೆ 1 ಹೆಚ್ಚಿದ ಈರುಳ್ಳಿ ಟೆಮೋಟೋ ಹಾಕಿ ಫ್ರೈ ಮಾಡಿ ನಂತರ ಸ್ವಲ್ಪ ಅರಶಿಣ ಪೇಪರ್ ಪುಡಿ ಹಾಕಿ ಫ್ರೈ ಮಾಡಿ ನಂತರ ಮಟನ್ ಚಾಪ್ಸ್ ಅನ್ನು ಹಾಕಿ ನಂತರ ಸ್ವಲ್ಪ ಉಪ್ಪು ಹಾಕಿ ಫ್ರೈ ಮಾಡಿ ಮತ್ತೆ ರುಬ್ಬಿಕೊಂಡ ಮಸಾಲವನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿ ನಂತರ 3ಲೋಟ ನೀರನ್ನು ಹಾಕಿ ಮುಚ್ಚಿ 5 ವಿಸಿಲ್ ಅನ್ನು ಹೊಡಿಸಿ.
ರುಚಿಕರವಾದ ರೆಸ್ಟೋರೆಂಟ್ ಶೈಲಿಯ ಮಟನ್ ಚಾಪ್ಸ್ ಅನ್ನು ಸವಿಯಲು ಸಿದ್ದ

