ಹಳ್ಳಿಯ ನಾಟಿ ಶೈಲಿಯ ಕೋಳಿ ಸಾರು
ಬೇಕಾಗಿರುವ ಸಾಮಗ್ರಿಗಳು
1. 1ಕೆಜಿ ನಾಟಿ ಕೋಳಿ
2. 5ಗುಂಟೂರು ಮೆಣಸಿನಕಾಯಿ
3. 5ಬ್ಯಾಡಗಿ ಮೆಣಸಿನಕಾಯಿ ಹಸಿ ಮೆಣಸಿನಕಾಯಿ
4. 2ಚಮಚ ಧನಿಯಾ ಬೀಜ
5. 2ಈರುಳ್ಳಿ ಟೆಮೋಟೋ
6. ಪುದೀನಾ ಕೋತೊಂಬರಿ ಸೊಪ್ಪು
7. ಅಲ್ಲ ಬೆಳ್ಳುಳ್ಳಿ ಪೇಸ್ಟ್
8. ಚಿಕನ್ ಮಸಾಲ
9. ಕರದ ಪುಡಿ ಅರಶಿಣ
10. ಎಣ್ಣೆ ಉಪ್ಪು
ಮಾಡುವ ವಿಧಾನ
ಮೊದಲಿಗೆ ಒಂದು ತವಾದಲ್ಲಿ ಎಣ್ಣೆ ಹಾಕಿ ಅದಕ್ಕೆ
ಧನಿಯಾ ಬೀಜ ಗುಂಟೂರು ಮೆಣಸಿನಕಾಯಿ
ಬ್ಯಾಡಗಿ ಮೆಣಸಿನಕಾಯಿ ಚೆನ್ನಾಗಿ ಫ್ರೈ ಮಾಡಿ
ಒಂದು ಮಿಕ್ಸಿ ಜಾರ್ ಅಲ್ಲಿ ಮಾಡಿದ ಫ್ರೈ ಯಾನ್ನು ಹಾಕಿ
ಅದಕ್ಕೆ 1 ಈರುಳ್ಳಿ ಪುದೀನಾ ಕೋತೊಂಬರಿ ಸೊಪ್ಪು ಹಾಕಿ
ಚೆನ್ನಾಗಿ ರುಬ್ಬಿ ನಂತರ ಒಂದು ಕುಕ್ಕರ್ ನಲ್ಲಿ 100ML ಎಣ್ಣೆ
ಹಾಕಿ ಅದಕ್ಕೆ 1 ಹಚ್ಚಿದ ಈರುಳ್ಳಿ ಟೆಮೋಟೋ ಹಾಕಿ ಫ್ರೈ ಮಾಡಿ
ನಾಟಿ ಕೋಳಿ ಹಾಕಿ ಸ್ವಲ್ಪ ಅರಿಶಿಣ ಉಪ್ಪು ಹಾಕಿ ಚೆನ್ನಾಗಿ ಫ್ರೈ ಮಾಡಿ
ನಂತರ ಕರದ ಪುಡಿ ಚಿಕನ್ ಮಸಾಲ ಅಲ್ಲ ಬೆಳ್ಳುಳ್ಳಿ ಪೇಸ್ಟ್ ಹಾಕಿ ಫ್ರೈ ಮಾಡಿ
ನಂತರ ರುಬ್ಬಿದ ಮಸಾಲವನ್ನು ಹಾಕಿ 3 ಲೋಟ ನೀರು ಹಾಕಿ ಮುಚ್ಚಿ
5 ವಿಸಿಲ್ ಅನ್ನು ಹೊಡಿಸಿ.
ಹಳ್ಳಿಯ ಶೈಲಿಯ ನಾಟಿ ಕೋಳಿ ಸಾರು ಸವಿಯಲು ಸಿದ್ದ.

