ನಮ್ಮ ಉತ್ತರ ಕರ್ನಾಟಕದ ಶೈಲಿಯ ಎಡಗೈ ಬದನೆಕಾಯಿ ಪಲ್ಯ.
![]() |
| ಉತ್ತರ ಕರ್ನಾಟಕ ಶೈಲಿಯ ಎಡಗೈ ಬದನೆಕಾಯಿ |
ಬೇಕಾಗಿರುವ ಸಾಮಗ್ರಿಗಳು
1. 1ಕೆಜಿ ಬದನೆಕಾಯಿ
2. 200 ಗ್ರಾಂ ಶೇಂಗಾ
3. 2ಚಮಚ ಕರದ ಪುಡಿ
4.ಕೋತೊಂಬರಿ ಸೊಪ್ಪು
5. 2ಹೆಚ್ಚಿದ ಈರುಳ್ಳಿ
6. ಶಾಶಿ ಮತ್ತು ಜೀರಿಗೆ ಮತ್ತು ಅರಶಿಣ
7.100ML ಎಣ್ಣೆ.
ಮಾಡುವ ವಿಧಾನ:
ಮೊದಲಿಗೆ 1ಕೆಜಿ ಬದನೆಕಾಯಿ 200 ಗ್ರಾಂ ಅಷ್ಟು ಶೇಂಗಾ ಉರಿದುಕೊಳ್ಳಿ
ಉರಿದುಕೊಂಡ ಆದಮೇಲೆ ರುಬ್ಬಿಕೊಳ್ಳಿ ರುಬ್ಬಿಕೊಂಡ ಮಿಶ್ರಣಕ್ಕೆ
3ಚಮಚ ದಷ್ಟು ಕರದ ಪುಡಿ 1ಚಮಚದಷ್ಟು ಅರಿಶಿಣ ಸ್ವಲ್ಪ ಕೋತೊಂಬರಿ ಸೊಪ್ಪು
ರುಚಿಗೆ ತಕ್ಕಷ್ಟು ಉಪ್ಪು ಸ್ವಲ್ಪ ಎಣ್ಣೆ ಹಕೊಂಡು ಮಿಕ್ಸ್ ಮಾಡಿ ನಂತರ ಬದನೆಕಾಯಿಯನ್ನು ನಾಲ್ಕು ಭಗಮಾಡಿ
ಮಿಕ್ಸ್ ಮಾಡಿದ ಮಿಶ್ರಣವನ್ನು ತುಂಬಿಕೊಳ್ಳಿ ನಂತರ ಒಂದು ಬಾಣಲೆ ಯಲ್ಲಿ
100ML ಅಷ್ಟು ಎಣ್ಣೆ ಹಕೊಳ್ಳು ಸ್ವಲ್ಪ ಬಿಸಿ ಅದ ನಂತರ ಅದಕ್ಕೆ ಶಶಿ ಜೀರಿಗೆ ಮತ್ತೆ
ಸಣ್ಣನೆ ಮಾಡಿದ 2 ಈರುಳ್ಳಿ ಹೆಚ್ಚಿದ ಹಾಕಿ ಸ್ವಲ್ಪ ಕಂದು ಬಣ್ಣ ಬರುವವರೆಗೂ ಬೇಯಿಸಿ
ನಂತರ ಬದನೆಕಾಯಿ ಹಾಕಿ ಸ್ವಲ್ಪ ಕೊತೊಂಬರಿ ಸಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ
ನಂತರ ಒಂದು ಅರ್ಧ ಲೋಟದಷ್ಟು ನೀರು ಹಾಕೊಳ್ಳು ಒಂದು ಎರಡು ಕುದಿ ಬಂದಮೇಲೆ
ಸ್ವಲ್ಪ ಕೊತೊಂಬರಿ ಎನ್ನು ಹಾಕಿ 10 ನಿಮಿಷದ ವರೆಗೂ ಮುಚ್ಚಿ.
ರುಚಿಕರವಾದ ನಮ್ಮ ಉತ್ತರ ಕರ್ನಾಟಕದ ಶೈಲಿಯ ಎಡಗೈ ಬದನೆಕಾಯಿ ತಿನ್ನಲು ಸಿದ್ಧ
ಇದನ್ನು ನೀವು ಪೂರಿ ಮತ್ತು ಚಪಾತಿ ರೊಟ್ಟಿಯ ಜೊತೆ ತಿನ್ನಬಹುದು

